ನನ್ನ ಊರು. ನನ್ನ ಆರೋಗ್ಯ.
ನಮ್ಮ ನಡೆ
ಆರೋಗ್ಯಕರ ಬೆಂಗಳೂರನ್ನು ಎಂದಾದರೂ ಕಲ್ಪಿಸಿಕೊಂಡಿದ್ದೀರಾ? ಹಾಗಾದರೆ ಬೆಂಗಳೂರನ್ನು ಆರೋಗ್ಯಕರ ನಗರವನ್ನಾಗಿಸಲು ನಾವೆಲ್ಲರೂ ಕೂಡಿ ಕೆಲಸ ಮಾಡಿದರೆ ಹೇಗೆ?
ಎಲ್ಲರಿಗೂ ನಮಸ್ಕಾರ! ಡೆಂಗ್ಯೂ ಜ್ವರವನ್ನು ತೊಲಗಿಸುವ ಹೋರಾಟದಲ್ಲಿ ನಮಗೆ ನಿಜವಾದ ಬದಲಾವಣೆಯನ್ನು ತರಲು ಶಕ್ತಿ ನೀಡುವ ಒನ್ ಹೆಲ್ತ್ ಯೋಜನೆಗೆ ಸ್ವಾಗತ! ಬನ್ನಿ, ಒಗ್ಗೂಡಿ, ಪ್ರತಿಯೊಬ್ಬರಿಗೂ ತಿಳುವಳಿಕೆ ನೀಡುತ್ತಾ ಒಂದು ಆರೋಗ್ಯಕರ ನಗರವನ್ನು ಕಟ್ಟೋಣ!
ಒನ್ ಹೆಲ್ತ್ ಯೋಜನೆ ಎಂದರೆ ಏನು?
ಸಾಮೂಹಿಕ ನಡೆ:
ನೀವು ವಾಟ್ಸಾಪು ಬಳಸುತ್ತಿದ್ದೀರಾ? ನಿಮ್ಮ ಬಳಿ ಐದು ನಿಮಿಷವಿದೆಯೇ? ನಿಮ್ಮ ಸುತ್ತಮುತ್ತ ಎಲ್ಲಾದರೂ ನಿಂತ ನೀರನ್ನು ನೋಡಿದ್ದೀರಾ? ಹಾಗಾದರೆ, ಬನ್ನಿ, ನಮ್ಮ ನಿಂತ ನೀರನ್ನು ಚೆಲ್ಲಿ, ಡೆಂಗ್ಯೂ ಜ್ವರವನ್ನು ತಡೆಗಟ್ಟಿ ಅಭಿಯಾನಕ್ಕೆ ಕೈಜೋಡಿಸಿ.
ಆರಂಭಿಸಲು +918496937347 ನಂಬರಿಗೆ ಸಂದೇಶ ಕಳುಹಿಸಿ. ಮೊದಲಿಗರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.
ಸಿಟಿಝೆನ್ ಸೈನ್ಸ್: ನಿಮ್ಮಂತಹ
ನಾಗರಿಕ ರಾಯಭಾರಿಗಳು ಮತ್ತು ಸ್ಥಳೀಯ ಪರಿಣಿತರ ಜ್ಞಾನ ಹಾಗೂ ಸಾಮರ್ಥ್ಯದ ಸಂಯೋಜನೆಯಿಂದ ಈ ಅದ್ಭುತ ಕಾರ್ಯಕ್ರಮವು ವಿನ್ಯಾಸಗೊಂಡಿದೆ. ಸಿಟಿಝೆನ್ ಸೈನ್ಸ್ ಮೂಲಕ ನಾವು, ಸೊಳ್ಳೆಗಳ ಸಂತಾನೋತ್ಪತ್ತಿಯ ಜಾಗಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪರಿಸರದ ಬಗ್ಗೆ ಮೌಲ್ಯಯುತ ದತ್ತಾಂಶಗಳನ್ನು ಸಂಗ್ರಹಿಸುತ್ತೇವೆ. ಇದು ತೀವ್ರ ಅಪಾಯದಲ್ಲಿರುವ ಸ್ಥಳಗಳನ್ನು ಗುರುತಿಸಲು ನಮಗೆ ನೆರವಾಗುತ್ತದೆ. ಹೆಚ್ಚಿನ ದತ್ತಾಂಶಗಳನ್ನು ನೀಡಿ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲಿರಿ. ಹಾಗೇ, ನಮ್ಮ ನಗರದಲ್ಲಿ ಡೆಂಗ್ಯೂ ಹರಡುವುದನ್ನು ತಡೆಗಟ್ಟಿರಿ.
To Join the Citizen Science Program Click HERE
ಈ ಅಭಿಯಾನ ಏಕೆ ಮುಖ್ಯ?
ಡೆಂಗ್ಯೂ ಜ್ವರ ಒಂದು ಗಂಭೀರವಾದ ಸೋಂಕು, ಆದರೆ ಒಟ್ಟಾಗಿ ಕೆಲಸ ಮಾಡುವುದರಿಂದ ಅದರ ಹರಡುವಿಕೆಯನ್ನು ತಡೆಗಟ್ಟಬಹುದು. ಈ ಸಮಸ್ಯೆಗೆ ಕಾರಣವಾದ ಪರಿಸರದ ಕಾರಣಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ, ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಿ, ನಮ್ಮ ಸಮುದಾಯವನ್ನು ಸುರಕ್ಷಿತವಾಗಿಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು.
ನೀವು ಏನು ಮಾಡಬಹುದು?
ನಮ್ಮ ಸಿಟಿಝೆನ್ ಸೈನ್ಸ್ ಯೋಜನೆಗೆ ಕೈಜೋಡಿಸಿರಿ
✔️ಸಾಮೂಹಿಕ ಅಭಿಯಾನದಲ್ಲಿ ಭಾಗವಹಿಸಿರಿ
✔️ ಒನ್ ಹೆಲ್ತ್ ಹಬ್ಬದಲ್ಲಿ ಪಾಲ್ಗೊಳ್ಳಿ
✔️ ಮಾಹಿತಿಯನ್ನು ಪಡೆದುಕೊಳ್ಳಿ
ನೆಟ್ ವರ್ಕ್ ಪರಿಣಿತರು 2020ರಲ್ಲಿ, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಡೆಸಿದ ಕಾರ್ಯಕ್ರಮಗಳ ಮೇಲ್ವಿಚಾರಣೆ, ಸೂಚನೆ ಮತ್ತು ಪ್ರತಿಕ್ರಿಯೆಗಳಿಗಾಗಿ ಶೀಘ್ರ ಪ್ರತಿಕ್ರಿಯೆ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಇದು ಬೆಂಗಳೂರಿನಲ್ಲಿರುವ ಪ್ರಧಾನ ವೈಜ್ಞಾನಿಕ ಸಲಹೆಗಾರರ ಎಸ್ & ಟಿ (BeST) ಗುಂಪಿನ ಅಡಿಯಲ್ಲಿ 2021 ರಲ್ಲಿ ನಡೆದ ಒನ್ ಹೆಲ್ತ್ ಬೆಂಗಳೂರು ನಗರ ಒಕ್ಕೂಟದ (One Health Bengaluru City Consortium-OHBC) ಆರಂಭಿಕ ಚರ್ಚೆಗಳಿಗೆ ಕಾರಣವಾಯಿತು. 2023 ರಲ್ಲಿ, OHBC ಸದಸ್ಯರು ಮತ್ತು ಬಿಬಿಎಂಪಿ, ಜಂಟಿಯಾಗಿ ಬೆಂಗಳೂರಿನ 14 ಮಿಲಿಯನ್ ನಿವಾಸಿಗಳಿಗಾಗಿ ಡೆಂಗ್ಯೂವನ್ನು ಗಮನದಲ್ಲಿಟ್ಟುಕೊಂಡು, ಒಂದು ರೋಗ ಪರಿವೀಕ್ಷಣಾ ಡ್ಯಾಶ್ ಬೋರ್ಡ್ ಅನ್ನು ಬಿಡುಗಡೆ ಮಾಡಿತು. 2024 ರಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗಗಳ ಸ್ಫೋಟವನ್ನು ತಡೆಗಟ್ಟಿ, ಮೇಲ್ವಿಚಾರಣೆ ಮಾಡಲು ಮತ್ತು ಪ್ರತಿಕ್ರಿಯಿಸಲು, ಬೆಂಗಳೂರು ಪುರಸಭಾ ಸರ್ಕಾರವು (ಬಿಬಿಎಂಪಿ) OHBC ಸದಸ್ಯರನ್ನು ಹೊಂದಿರುವ ಅದ್ಭುತವಾದ ಒನ್ ಹೆಲ್ತ್ ಘಟಕವನ್ನು ಆರಂಭಿಸಿತು.